Not Found
Suggestion
- Experiment with various terms
- Experiment with various terms
- Experiment with various terms
Search Not Found
Try Searching
Not Sure
Assist Heading
13165151351351
Not Found
Suggestion
Search Not Found
Try Searching
Not Sure
Assist Heading
13165151351351
2016ರ ಮುಂಗಾರು ಬೆಳೆಯಿಂದ ಪಿಎಮ್‌ಎಫ್‌ಬಿವೈ-ಯನ್ನು ಪ್ರಾರಂಭಿಸಲಾಯಿತು ಮತ್ತು ಇದು ಬದಲಾಯಿಸಿ ಮಾರ್ಪಡಿಸಲಾದ ಭಾರತದ ರಾಷ್ಟೀಯ ಕೃಷಿ ವಿಮಾ ಯೋಜನೆಯಾಗಿದೆ
ಒಂದು ರಾಷ್ಟ್ರ, ಒಂದು ಬೆಳೆ, ಒಂದು ಪ್ರೀಮಿಯಮ್ ಎಂಬ ಉದ್ದೇಶದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿದೆ. ಬೆಳೆ ಕಡಿತದ ಪ್ರಯೋಗಗಳ ಮೂಲಕ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಅಂದಾಜು ಮಾಡುವ ಪ್ರಕಾರ ಬೆಳೆಯ ಇಳುವರಿ ಕಡಿಮೆಯಾದ ಕಾರಣ ರೈತರು ಅನುಭವಿಸುವ ನಷ್ಟವನ್ನು ಸರಿದೂಗಿಸುವ ಉದ್ದೇಶವನ್ನು ಈ ಹೊಸ ಯೋಜನೆಯು ಹೊಂದಿದೆ.
ಭಾರತದಲ್ಲಿ ಚಂಡಮಾರುತದ ಮಳೆಗಳು ಮತ್ತು ಅಕಾಲಿಕ ಮಳೆಗಳ ಕಾರಣ ಉಂಟಾಗುವ ಬಿತ್ತನೆಯ ಮುಂಚಿನ ನಷ್ಟಗಳು ಹಾಗೂ ಕೊಯ್ಲಿನ ನಂತರದ ನಷ್ಟಗಳನ್ನು ಕೂಡ ಈ ಯೋಜನೆಯು ಭರಿಸುತ್ತದೆ. ಈ ಹಿಂದೆ ರಕ್ಷಣೆ ನೀಡಲಾಗುತ್ತಿದ್ದ ಆಲಿಕಲ್ಲು ಮಳೆ ಮತ್ತು ಭೂಕುಸಿತದ ಅಪಾಯಗಳಿಗೆ ಹೆಚ್ಚುವರಿಯಾಗಿ, ಪ್ರವಾಹದಂತಹ ಸ್ಥಳೀಯ ವ್ಯಾಪ್ತಿಯ ಅನಾಹುತಗಳಿಂದ ಉಂಟಾಗುವ ನಷ್ಟವನ್ನು ಸರಿದೂಗಿಸುವುದಕ್ಕೆ ಕೂಡ ಇದರಲ್ಲಿ ಅವಕಾಶವಿದೆ.
ಈ ಯೋಜನೆಗಳು ಗ್ರಾಮೀಣ ಮಾರುಕಟ್ಟೆಯಲ್ಲಿ ಬೆಳೆ ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ ಒಟ್ಟು ಬಿತ್ತನೆಯ ಪ್ರದೇಶದ 50%ಗೆ ವಿಮಾ ರಕ್ಷಣೆ ನೀಡುವ ಉದ್ದೇಶ ಹೊಂದಿದೆ.
ರೈತ ಕೊಡಬೇಕಾದ ವಿಮೆಯ ಪ್ರೀಮಿಯಂ ಮೊತ್ತ ಈ ಕೆಳಗಿನ ಕೋಷ್ಟಕದ ಪ್ರಕಾರ ಇರುತ್ತದೆ
ವಿಮಾ ಮೊತ್ತ ಅಥವಾ ಆ್ಯಕ್ಚುರಿಯಲ್ ದರ ಯಾವುದು ಕಡಿಮೆಯೋ ಅದು
ವಿಮಾ ಮೊತ್ತ ಅಥವಾ ಆ್ಯಕ್ಚುರಿಯಲ್ ದರ ಯಾವುದು ಕಡಿಮೆಯೋ ಅದು
ವಿಮಾ ಮೊತ್ತ ಅಥವಾ ಆ್ಯಕ್ಚುರಿಯಲ್ ದರ ಯಾವುದು ಕಡಿಮೆಯೋ ಅದು
ಪ್ರಮುಖ ವೈಶಿಷ್ಟ್ಯಗಳು
ಹೊಸ ಯೋಜನೆಯು ಉಪಗ್ರಹದಿಂದ ದೊರೆಯುವ ಚಿತ್ರಗಳು, ಸಸ್ಯವರ್ಗದ ಸೂಚಕಗಳು ಇತ್ಯಾದಿಯಂತಹ ನೂತನ ಟೆಕ್ನಾಲಜಿಗಳ ಬಳಕೆ ಮುಂತಾದ ಅನೇಕ ಹೊಸ ವಿಷಯಗಳನ್ನು ಒಳಗೊಳ್ಳುತ್ತದೆ; ಜೊತೆಗೆ ಇಳುವರಿಯ ಅಂದಾಜು ಲೆಕ್ಕಾಚಾರದ ಸಮಯದಲ್ಲಿ ವೇಗ ಮತ್ತು ನಿಖರತೆಯನ್ನು ಹೆಚ್ಚಿಸುವ ಸಲುವಾಗಿ ಸ್ಮಾರ್ಟ್ ಫೋನ್‌ಗಳು / ಕೈಯಲ್ಲಿ ಹಿಡಿದುಕೊಳ್ಳುವ ಸಾಧನಗಳ ಕಡ್ಡಾಯದ ಬಳಕೆಯನ್ನೂ ಒಳಗೊಳ್ಳುತ್ತದೆ. ವಿಮಾ ಸಂರಕ್ಷಣೆ ನೀಡುವಲ್ಲಿ ವಿವಿಧ ಪ್ರದೇಶಗಳ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡುವುದಕ್ಕಾಗಿ, ಈ ಯೋಜನೆಯು ಜಮೀನಿನ ದಾಖಲೆಗಳ ಡಿಜಿಟಲೀಕರಣಕ್ಕೆ ಪ್ರೋತ್ಸಾಹವನ್ನು ನೀಡುತ್ತದೆ.
ಹೆಚ್ಚಿನ ವಿವರಗಳಿಗೆ ನೀವು ಪ್ರಧಾನ ಮಂತ್ರಿ ಪಸಲ್ ಬಿಮಾ ಯೋಜನೆಯ ಭಾರತ ಸರ್ಕಾರದ ವೆಬ್‌ಸೈಟ್ -ಗೆ ಭೇಟಿ ನೀಡಬಹುದು. www.pmfby.gov.in
ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ಬೆಳೆ ನಷ್ಟ / ಹಾನಿಯಿಂದ ಸಂಕಟಪಡುವ ರೈತರಿಗೆ ಆರ್ಥಿಕ ನೆರವು ನೀಡುವುದು
ಕೃಷಿ ಕ್ಷೇತ್ರಕ್ಕೆ ಖಾತ್ರಿಯಾಗಿ ಸಾಲ ಸಿಗುವಂತೆ ಮಾಡುವುದು; ಅದರಿಂದ ಆಹಾರದ ಭದ್ರತೆ, ಬೆಳೆಯ ವೈವಿಧ್ಯೀಕರಣ ಮತ್ತು ಕೃಷಿ ಕ್ಷೇತ್ರದ ಬೆಳವಣಿಗೆ ಹಾಗೂ ಸ್ಪರ್ಧಾತ್ಮಕತೆ ಹೆಚ್ಚುವುದರ ಜೊತೆಗೆ ಅದು ರೈತರನ್ನು ಉತ್ಪಾದನಾ ಅಪಾಯಗಳಿಂದ ರಕ್ಷಿಸುತ್ತದೆ.
ರೈತರು ಕೃಷಿಯಲ್ಲಿ ಮುಂದುವರಿಯುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅವರ ಆದಾಯವನ್ನು ಸ್ಥಿರಗೊಳಿಸುವುದು
ಹೊಸ ನಮೂನೆಯ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುವುದು
ಅರ್ಹತೆಯ ಮಾನದಂಡಗಳು
ಅಧಿಸೂಚಿತ ಬೆಳೆಗಳಿಗೆ ಆರ್ಥಿಕ ಸಂಸ್ಥೆಗಳಿಂದ [FI-ಗಳು] ಅಲ್ಪಾವಧಿಯ ಋತುವಿನ ಕೃಷಿ ಕಾರ್ಯಾಚರಣೆಗಳ [SAO] ಸಾಲಗಳನ್ನು ಪಡೆದಿರುವ / ಕಿಸಾನ್ ಕ್ರೆಡಿಟ್ ಕಾರ್ಡ್ [KCC] ಹೊಂದಿರುವ ರೈತರೂ ಒಳಗೊಂಡಂತೆ [ಈ ಮುಂದೆ ಅವರನ್ನು ಸಾಲಗಾರ ರೈತರು ಎಂದು ಕರೆಯಲಾಗುತ್ತದೆ], ಎಲ್ಲಾ ರೈತರಿಗೂ ಈ ಯೋಜನೆಯು ಐಚ್ಛಿಕವಾಗಿರುತ್ತದೆ. ಹಾಲಿ ಚಾಲ್ತಿಯಲ್ಲಿರುವ ಸಾಲಗಾರ ರೈತರು ವರ್ಷದ ಯಾವುದೇ ಸಮಯದಲ್ಲಿ, ಆದರೆ ಸಂಬಂಧಪಟ್ಟ ಋತುಗೆ ರೈತರು ನೋಂದಾಯಿಸಿಕೊಳ್ಳಬೇಕಾದ ಅಂತಿಮ ತಾರೀಖಿನ ಕನಿಷ್ಠ 7 ದಿನ ಮೊದಲು ಅವರಿಗೆ ಸಾಲ ಮಂಜೂರು ಮಾಡಿರುವ ಬ್ಯಾಂಕ್ ಶಾಖೆಗಳಿಗೆ ಅವಶ್ಯಕ ಘೋಷಣೆಯನ್ನು ಸಲ್ಲಿಸುವ ಮೂಲಕ ಈ ಯೋಜನೆಯಿಂದ ಹೊರಗೆ ಹೋಗುವ ಆಯ್ಕೆಯನ್ನು ಹೊಂದಿರುತ್ತಾರೆ. ಆದರೆ ಘೋಷಣೆಯನ್ನು ಸಲ್ಲಿಸದೆ ಇರುವ ಆ ಎಲ್ಲಾ ರೈತರೂ ವಿಮಾ ರಕ್ಷಣೆಗೆ ಒಳಪಟ್ಟಿರುತ್ತಾರೆ.
ಮಳೆಯ ಕೊರತೆ ಅಥವಾ ಋತುವಿನ ಪ್ರತಿಕೂಲ ಪರಿಸ್ಥಿತಿಗಳ ಕಾರಣ ವಿಮೆ ಮಾಡಲಾಗಿರುವ ಸ್ಥಳದಲ್ಲಿ ಬಿತ್ತನೆ / ನಾಟಿ ಸಾಧ್ಯವಾಗದೆ ಇರುವುದು
ಬರಗಾಲ, ಒಣ ಹವೆ, ಪ್ರವಾಹ, ಜಮೀನು ಮುಳುಗಡೆ, ಕ್ರಿಮಿಕೀಟಗಳ ಪೀಡೆಗಳು ಮತ್ತು ರೋಗಗಳು, ಭೂಕುಸಿತ, ಪ್ರಾಕೃತಿಕ ಬೆಂಕಿ ಮತ್ತು ಸಿಡಿಲು ಬಡಿತ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರಚಂಡ ಬಿರುಗಾಳಿ, ತೂಫಾನು, ಚಂಡಮಾರುತ, ಹರಿಕೇನ್ ಮತ್ತು ಟಾರ್ನಡೋದಂತಹ ತಡೆಯಲಾಗದ ಅಪಾಯಗಳ ಕಾರಣ ಉಂಟಾಗುವ ಇಳುವರಿಯ ನಷ್ಟಗಳಿಗೆ ವಿಮಾ ರಕ್ಷಣೆ ನೀಡಲು ಸಮಗ್ರರೂಪದ ಅಪಾಯಗಳ ವಿಮೆ ನೀಡಲಾಗುತ್ತದೆ.
ಕಟಾವಿನ ನಂತರ ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಡಿದ ಎರಡು ವಾರದೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಲೆ ನಾಶವಾದಲ್ಲಿ ವಿಮೆ ರಕ್ಷಣೆ ದೊರೆಯುತ್ತದೆ
ಅಧಿಸೂಚಿತ ಪ್ರದೇಶದಲ್ಲಿ ಉಳಿದವುಗಳಿಂದ ಪ್ರತ್ಯೇಕವಾಗಿರುವ ಒಂಟಿ ಗದ್ದೆಗಳಲ್ಲಿ ಆಲಿಕಲ್ಲು ಮಳೆ, ಭೂಕುಸಿತ ಮತ್ತು ನೆರೆ ಹಾವಳಿ ಉಂಟಾಗಿದೆ ಎಂದು ಗುರುತಿಸಲ್ಪಟ್ಟ ಸ್ಥಳೀಯವಾದ ಅಪಾಯಗಳಿಂದ ಸಂಭವಿಸಿದ ನಷ್ಟ / ಹಾನಿಗಳಿಗೆ ವಿಮಾ ರಕ್ಷಣೆ ದೊರೆಯುತ್ತದೆ.
*ಸಾಮಾನ್ಯ ನಿಷೇಧನೆ - ಯುದ್ಧ ಮತ್ತು ನ್ಯೂಕ್ಲಿಯರ್ ಅಪಾಯಗಳಿಂದ ಉಂಟಾಗುವ ನಷ್ಟಗಳು, ದುರುದ್ದೇಶದಿಂದ ಮಾಡಿದ ಹಾನಿ ಮತ್ತು ಇತರ ತಡೆಗಟ್ಟಬಹುದಾದ ಅಪಾಯಗಳನ್ನು ವಿಮಾ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಭಾರತ ಸರ್ಕಾರದ ವೆಬ್ಸೈಟ್ಗೆ ಭೇಟಿ ಕೊಡಲು, ಇಲ್ಲಿ ಕ್ಲಿಕ್ ಮಾಡಿರಿ
Visit Websiteಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು (PMFBY) ಕಾರಣ ಬೆಳೆ ನಷ್ಟ ಪರಿಣಾಮವಾಗಿ ಪ್ರತಿಕೂಲ ಹವಾಮಾನದ ಕಾರಣ ಸಂಭವಿಸಿದ ನಷ್ಟಗಳಿಗೆ ರೈತರಿಗೆ ರಕ್ಷಣೆ ನೀಡುತ್ತದೆ.
ಇಳುವರಿಯ ನಷ್ಟಗಳು - ಇದು ಪ್ರಾಕೃತಿಕ ಬೆಂಕಿ ಮತ್ತು ಸಿಡಿಲು ಬಡಿತ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರಚಂಡ ಬಿರುಗಾಳಿ, ತೂಫಾನು, ಚಂಡಮಾರುತ, ಹರಿಕೇನ್ ಮತ್ತು ಟಾರ್ನಡೋ ಇತ್ಯಾದಿ; ಪ್ರವಾಹ, ಜಮೀನು ಮುಳುಗಡೆ ಮತ್ತು ಭೂಕುಸಿತ; ಬರಗಾಲ, ಒಣ ಹವೆ, ಕ್ರಿಮಿಕೀಟಗಳ ಪೀಡೆಗಳು ಮತ್ತು ರೋಗಗಳು ಇತ್ಯಾದಿಯನ್ನು ಒಳಗೊಳ್ಳುತ್ತದೆ.
ಬಿತ್ತನೆಗೆ ತಡೆ ಒಂದು ಅಧಿಸೂಚಿತ ಪ್ರದೇಶದ ವಿಮೆ ಮಾಡಿಸಿರುವ ಹೆಚ್ಚಿನಷ್ಟು ರೈತರು ಬಿತ್ತನೆ / ನಾಟಿ ಮಾಡುವ ಉದ್ದೇಶ ಹೊಂದಿದ್ದು ಮತ್ತು ಅದಕ್ಕಾಗಿ ಹಣ ಖರ್ಚು ಮಾಡಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ವಿಮೆ ಮಾಡಿಸಿರುವ ಬೆಳೆಯ ಬಿತ್ತನೆ / ನಾಟಿ ಮಾಡಲಾಗದಿದ್ದರೆ, ಅವರು ತಮಗಾದ ನಷ್ಟದ ಗರಿಷ್ಠ 25% ವರೆಗೆ ಕ್ಲೈಮ್ ಮಾಡಲು ಅರ್ಹರಾಗಿರುತ್ತಾರೆ.
ಕೊಯ್ಲಿನ ನಂತರದ ನಷ್ಟಗಳು ಕಟಾವಿನ ನಂತರ ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಡಿದ ಎರಡು ವಾರದೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಲೆ ನಾಶವಾದಲ್ಲಿ ವಿಮೆ ರಕ್ಷಣೆ ದೊರೆಯುತ್ತದೆ
ಸ್ಥಳೀಯವಾದ ಅನಾಹುತಗಳು ಆಲಿಕಲ್ಲು ಮಳೆ, ಭೂಕುಸಿತ, ಬೆಲೆ ಮುಳುಗಡೆ, ಮೇಘಸ್ಪೋಟ ಮತ್ತು ಗುಡುಗು ಮಿಂಚುಗಳಿಂದ ಉಂಟಾಗುವ ನಷ್ಟಕ್ಕೆ ವಿಮೆ ರಕ್ಷಣೆ ದೊರೆಯುತ್ತದೆ
ಅಧಿಸೂಚಿತ ಬೆಳೆಗಳಿಗೆ ಆರ್ಥಿಕ ಸಂಸ್ಥೆಗಳಿಂದ [FI-ಗಳು] ಅಲ್ಪಾವಧಿಯ ಋತು ಕೃಷಿ ಕಾರ್ಯಾಚರಣೆಗಳ [SAO] ಸಾಲಗಳನ್ನು ಪಡೆದಿರುವ / ಕಿಸಾನ್ ಕ್ರೆಡಿಟ್ ಕಾರ್ಡ್ [KCC] ಹೊಂದಿರುವ ರೈತರೂ ಒಳಗೊಂಡಂತೆ [ಈ ಮುಂದೆ ಅವರನ್ನು ಸಾಲಗಾರ ರೈತರು ಎಂದು ಕರೆಯಲಾಗುತ್ತದೆ], ಎಲ್ಲಾ ರೈತರಿಗೂ ಈ ಯೋಜನೆಯು ಐಚ್ಛಿಕವಾಗಿರುತ್ತದೆ. ಹಾಲಿ ಚಾಲ್ತಿಯಲ್ಲಿರುವ ಸಾಲಗಾರ ರೈತರು ವರ್ಷದ ಯಾವುದೇ ಸಮಯದಲ್ಲಿ, ಆದರೆ ಸಂಬಂಧಪಟ್ಟ ಋತುಗೆ ರೈತರು ನೋಂದಾಯಿಸಿಕೊಳ್ಳಬೇಕಾದ ಅಂತಿಮ ತಾರೀಖಿನ ಕನಿಷ್ಠ 7 ದಿನ ಮೊದಲು ಅವರಿಗೆ ಸಾಲ ಮಂಜೂರು ಮಾಡಿರುವ ಬ್ಯಾಂಕ್ ಶಾಖೆಗಳಿಗೆ ಅವಶ್ಯಕ ಘೋಷಣೆಯನ್ನು ಸಲ್ಲಿಸುವ ಮೂಲಕ ಈ ಯೋಜನೆಯಿಂದ ಹೊರಗೆ ಹೋಗುವ ಆಯ್ಕೆಯನ್ನು ಹೊಂದಿರುತ್ತಾರೆ. ಆದರೆ ಘೋಷಣೆಯನ್ನು ಸಲ್ಲಿಸದೆ ಇರುವ ಆ ಎಲ್ಲಾ ರೈತರೂ ವಿಮಾ ರಕ್ಷಣೆಗೆ ಒಳಪಟ್ಟಿರುತ್ತಾರೆ.
ಕ್ರಮ ಸಂಖ್ಯೆ | ಸೀಸನ್ | ಬೆಳೆಗಳು | ರೈತ ಕಟ್ಟಬೇಕಾದ ಗರಿಷ್ಠ ವಿಮಾ ಪ್ರೀಮಿಯಮ್ (ವಿಮಾ ಮೊತ್ತದ %) |
---|---|---|---|
1 | ಮುಂಗಾರು ಬೆಳೆ | ಎಲ್ಲಾ ಆಹಾರ ಧಾನ್ಯಗಳು ಮತ್ತು ಎಣ್ಣೆಕಾಳು ಬೆಳೆಗಳು (ಎಲ್ಲಾ ಏಕದಳ ಧಾನ್ಯಗಳು, ರಾಗಿ, ಜೋಳದಂತಹ ಸಣ್ಣ ಕಾಳುಗಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜದ ಬೆಳೆಗಳು) | ಎಲ್ಲಾ ಆಹಾರ ಧಾನ್ಯಗಳು ಮತ್ತು ಎಣ್ಣೆಕಾಳು ಬೆಳೆಗಳು (ಎಲ್ಲಾ ಏಕದಳ ಧಾನ್ಯಗಳು, ರಾಗಿ, ಜೋಳದಂತಹ ಸಣ್ಣ ಕಾಳುಗಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜದ ಬೆಳೆಗಳು) |
2 | ಹಿಂಗಾರು ಬೆಳೆ | ಎಲ್ಲಾ ಆಹಾರ ಧಾನ್ಯಗಳು ಮತ್ತು ಎಣ್ಣೆಕಾಳು ಬೆಳೆಗಳು (ಎಲ್ಲಾ ಏಕದಳ ಧಾನ್ಯಗಳು, ರಾಗಿ, ಜೋಳದಂತಹ ಸಣ್ಣ ಕಾಳುಗಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜದ ಬೆಳೆಗಳು) | ಎಸ್‌ಐ ಅಥವಾ ಆ್ಯಕ್ಚುರಿಯಲ್ ರೇಟಿನ 1.5%, ಯಾವುದು ಕಡಿಮೆಯೋ ಅದು |
3 | Kharif and Rabi | Annual Commercial / Annual Horticultural crops | 5% of SI or Actuarial rate, whichever is less |
ಹೊಸ ಕಾರ್ಯಾಚರಣೆಯ ಮಾರ್ಗಸೂಚಿಗಳ ಪ್ರಕಾರ, ಸಾಲಗಾರರು ಮತ್ತು ಸಾಲಗಾರರಲ್ಲದ ರೈತರು, ಇಬ್ಬರಿಗೂ ಅವರ [ರೈತರ] ಖಾತೆಯಿಂದ ಪ್ರೀಮಿಯಮ್ ಮೊತ್ತವನ್ನು ಡೆಬಿಟ್ ಮಾಡುವ ಅಂತಿಮ ದಿನಾಂಕ ಮುಂಗಾರು ಬೆಳೆಗೆ ಜುಲೈ 15 ಮತ್ತು ಹಿಂಗಾರು ಬೆಳೆಗೆ ಡಿಸೆಂಬರ್ 15 ಆಗಿರುತ್ತದೆ.
ಸಂಬಂಧಪಟ್ಟ ಇನ್‌ಶೂರೆನ್ಸ್ ಯೂನಿಟ್‌ನ [ಅಗತ್ಯವಿರುವ ಸಂಖ್ಯೆಯ ಸಿಸಿಇ-ಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ] ವಿಮೆ ಮಾಡಲಾದ ಋತು ವಿಮೆ ಮಾಡಲಾದ ಬೆಳೆಯ ಪ್ರತಿ ಹೆಕ್ಟೇರ್‌ನ 'ನಿಜವಾದ ಇಳುವರಿ'ಯು [AY] ನಿಗದಿತ 'ಪ್ರಾರಂಭಿಕ
ಇಳುವರಿ'ಯ [TY] ಮಟ್ಟಕ್ಕಿಂತ ಕಡಿಮೆ ಇದ್ದರೆ, ಆ ಸ್ಪಷ್ಟಪಡಿಸಲಾದ ಏರಿಯಾದಲ್ಲಿ ಆ ನಿರ್ದಿಷ್ಟ ಬೆಳೆಯನ್ನು ಬೆಳೆದಿರುವ ವಿಮೆ ಮಾಡಿಸಿಕೊಂಡ ಎಲ್ಲಾ ರೈತರೂ ಇಳುವರಿಯಲ್ಲಿ ಆ ಪ್ರಮಾಣದ ನಷ್ಟವನ್ನು ಅನುಭವಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಪಿಎಮ್‌ಎಫ್‌ಬಿವೈ ಇಂತಹ ಆಕಸ್ಮಿಕ ಪ್ರಸಂಗಗಳ ವಿರುದ್ಧ ವಿಮಾ ರಕ್ಷಣೆ ನೀಡುತ್ತದೆ. 'ಕ್ಲೈಮ್'-ಅನ್ನು ಈ ಮುಂದಿನ ಫಾರ್ಮುಲಾದ ಪ್ರಕಾರ ಐಯು ಮಟ್ಟದಲ್ಲಿ ಲೆಕ್ಕ ಹಾಕಲಾಗುತ್ತದೆ: [ಪ್ರಾರಂಭಿಕ ಇಳುವರಿ – ನಿಜವಾದ ಇಳುವರಿ] ಪ್ರಾರಂಭಿಕ ಇಳುವರಿ X ವಿಮಾ ಮೊತ್ತ, ಇಲ್ಲಿ ಅಧಿಸೂಚಿತ ಇಶೂರೆನ್ಸ್ ಯೂನಿಟ್‌ನಲ್ಲಿ ಸಂಬಂಧಪಟ್ಟ ಬೆಳೆಯ ಪ್ರಾರಂಭಿಕ ಇಳುವರಿಯು [TY] ಆ ಸೀಸನ್‌ನ ಕಳೆದ ಏಳು ವರ್ಷಗಳಲ್ಲಿನ ಅತ್ಯುತ್ತಮ 5 ವರ್ಷಗಳ ಸರಾಸರಿ ಇಳುವರಿಯಾಗಿರುತ್ತದೆ; ಇದನ್ನು ಆ ಬೆಳೆಯ ಅನ್ವಯಿಸುವ ನಷ್ಟ ಪರಿಹಾರ ಮಟ್ಟದಿಂದ ಗುಣಿಸಲಾಗುತ್ತದೆ.
ನಾವು ಸಮರ್ಪಿಸಿದ PMFBY ಟೋಲ್ ಫ್ರೀ ಸಂಖ್ಯೆ – 1800 266 4141
ಯುದ್ಧ ಮತ್ತು ಪರಮಾಣು ಅಪಾಯಗಳು, ದುರುದ್ದೇಶಪೂರಿತ ಹಾನಿ ಮತ್ತು ಇತರ ತಡೆಗಟ್ಟಬಹುದಾದ ಅಪಾಯಗಳಿಂದ ಉಂಟಾಗುವ ನಷ್ಟಗಳನ್ನು ಪರಿಗಣಿಸಲಾಗುವದಿಲ್ಲ